ನೆಲಮಂಗಲ: ನೆಲಮಂಗಲ ತಾಲ್ಲೂಕು ವ್ಯವಸಾಯೋದ್ಪನ್ನಗಳ ಮಾರಾಟ ಸಹಕಾರ ಸಂಘ ನಿಯಮಿತ (ಟಿ.ಎ.ಪಿ.ಸಿ.ಎಂ.ಎಸ್ ನಿ) ನೆಲಮಂಗಲ ಇದರ ನೂತನ ಕಟ್ಟಡ, ಉಗ್ರಾಣ ಮತ್ತು ಮಾರಾಟ ಮಳಿಗೆಯ ಉದ್ಘಾಟನಾ ಸಮಾರಂಭವು ಇಂದು (ದಿನಾಂಕ 17-10-2025) ನೆಲಮಂಗಲದಲ್ಲಿ ವಿಜೃಂಭಣೆಯಿಂದ ನೆರವೇರಿತು.
​ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ನೆಲಮಂಗಲ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್. ಶ್ರೀನಿವಾಸ್ ರವರು, ಸಹಕಾರ ಸಂಘದ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಬಳಿಕ ಮಾತನಾಡಿದ ಅವರು, ಈ ಸಹಕಾರ ಸಂಘಕ್ಕೆ ನನ್ನಿಂದ ಆಗುವ ಅತಿ ಹೆಚ್ಚು ಆರ್ಥಿಕ ಅನುದಾನವನ್ನು ನೀಡುತ್ತೇನೆ ಎಂದು ಸಭೆಯಲ್ಲಿ ಘೋಷಣೆ ಮಾಡಿದರು. ಅವರ ಈ ಘೋಷಣೆಗೆ ಸಭೆಯಲ್ಲಿದ್ದ ಸದಸ್ಯರು ಮತ್ತು ಗಣ್ಯರು ಹರ್ಷ ವ್ಯಕ್ತಪಡಿಸಿದರು.
​ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ.ಎ.ಪಿ.ಸಿ.ಎಂ.ಎಸ್ ನಿ., ನೆಲಮಂಗಲದ ಅಧ್ಯಕ್ಷರಾದ ಶ್ರೀ ಬಿ.ಎನ್. ನರಸಿಂಹಮೂರ್ತಿ ರವರು ವಹಿಸಿದ್ದರು.

ನಗರ ಸಭೆ ನೆಲಮಂಗಲದ ಅಧ್ಯಕ್ಷರಾದ ಶ್ರೀ ಎನ್. ಗಣೇಶ್ ರವರು, ವಕೀಲರು ಹಾಗೂ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಕೆ. ಕೇಶವಮೂರ್ತಿ ರವರು, ಸಹಕಾರ ಸಂಘಗಳ ಅಪರ ನಿಬಂಧಕರು (ಬಳಕೆ ಮತ್ತು ಮಾರಾಟ) ಶ್ರೀ ಬಾಲಶೇಖರವರ್ .ಹೆಚ್ . ಕ.ಸ.ಸೇ ರವರು, ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಂ.ಕೆ. ನಾಗರಾಜು ರವರು, ಸಹಕಾರ ಸಂಘಗಳ ಉಪನಿಬಂಧಕರು (ಬೆಂಗಳೂರು ಗ್ರಾಮಾಂತರ ಜಿಲ್ಲೆ) ಡಾ ಹೆಚ್. ಹೆಚ್. ಚಂದ್ರಶೇಖರ್ ರವರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
​ಸಂಘದ ಉಪಾಧ್ಯಕ್ಷರು ಮತ್ತು ನಿರ್ದೇಶಕ ಮಂಡಳಿಯ ಸದಸ್ಯರುಗಳಾದ ಶ್ರೀ ಟಿ.ಎಸ್. ಮೋಹನ್ ಕುಮಾರ್, ಶ್ರೀ ಬಿ.ಹೆಚ್. ಶಿವರಾಮಯ್ಯ, ಶ್ರೀ ಕೆ.ಆರ್. ಗುರು ಪ್ರಕಾಶ್, ಶ್ರೀ ಡಿ.ಜೆ. ಜಗಜ್ಯೋತಿ ಬಸವೇಶ್ವರ, ಶ್ರೀಮತಿ ಜಿ. ಮಂಜುಳ ಮೋಹನ್ ಕುಮಾರ್, ಶ್ರೀಮತಿ ಎಚ್.ಎಂ. ಸಿಂಧೂ ಸತೀಶ್ ಡಿ.ಜೆ, ಶ್ರೀ ವೀರ ಮಾರೇಗೌಡ, ಶ್ರೀ ಜಿ. ಸಂಪತ್ ಬಿ.ಇ, ಶ್ರೀ ಹೆಚ್. ನಾಗಭೂಷಣ್, ಶ್ರೀ ಮಹಮದ್ ಸಿರಾಜ್ ಅಹಮ್ಮದ್ ರವರು ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಪ್ರತಿನಿಧಿ ಶ್ರೀ ಪಟ್ಟಾಭಿರಾಮಯ್ಯ ಎಂ. ಸಿ (ಜಯಣ್ಣ) ರವರು ಉಪಸ್ಥಿತರಿದ್ದರು.
​ಸಹಕಾರ ಸಂಘಗಳ ಸಹಾಯಕ ನಿಬಂಧಕರು ಮತ್ತು ಸರ್ಕಾರದ ಪ್ರತಿನಿಧಿಗಳಾದ ಶ್ರೀ ಆರ್. ರಾಮಾಂಜನೇಯ ರವರು, ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿದ ಗುತ್ತಿಗೆದಾರರು ಮತ್ತು ಅಭಿಯಂತರರಾದ ಶ್ರೀ ಮೋಹನ್ ಬಾಬು ಮತ್ತು ಶ್ರೀ ಸಂತೋಷ್ ಬಿ ಕೆ ರವರು, ಹಾಗೂ ಸಂಘದ ಪ್ರಭಾರ ಕಾರ್ಯದರ್ಶಿ ಶ್ರೀ ಎಚ್. ನಾಗರಾಜು ಮತ್ತು ಸಿಬ್ಬಂದಿ ವರ್ಗದವರು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು.
​ಈ ನೂತನ ಕಟ್ಟಡವು ನೆಲಮಂಗಲ ತಾಲೂಕಿನ ರೈತರಿಗೆ ಮತ್ತಷ್ಟು ಉತ್ತಮ ಸೇವೆಗಳನ್ನು ನೀಡಲು ಸಹಾಯಕವಾಗಲಿದೆ ಎಂದು ಸಂಘದ ಅಧ್ಯಕ್ಷ ಶ್ರೀ ಬಿ.ಎನ್. ನರಸಿಂಹಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *