Month: September 2025

ರಾಜ್ಯದಲ್ಲಿ ಖಾಲಿ ಇರುವ 2.5 ಲಕ್ಷ ಹುದ್ದೆಗಳ ಭರ್ತಿ, ಪಿ. ರಾಜೀವ್ ಅವರ ಪ್ರಮುಖ ಒತ್ತಾಯಗಳು ಮತ್ತು ಟೀಕೆಗಳು, 5 ವರ್ಷಗಳ ಸಡಿಲಿಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮಾಜಿ ಶಾಸಕ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು, ಕರ್ನಾಟಕದಲ್ಲಿ ಖಾಲಿ ಇರುವ 2.5 ಲಕ್ಷ ಸರ್ಕಾರಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು ಮತ್ತು ಉದ್ಯೋಗಾಕಾಂಕ್ಷಿಗಳ ಬೇಡಿಕೆಯಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಬೇಕು ಎಂದು…

ಏಷ್ಯಾಕಪ್ ಗೆದ್ದರೂ ಟ್ರೋಫಿ ನಿರಾಕರಣೆ: ಸೂರ್ಯಕುಮಾರ್ ಯಾದವ್ ಬೇಸರ

​ದುಬೈನಲ್ಲಿ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆಲುವು ಸಾಧಿಸಿದರೂ ಟ್ರೋಫಿ ನೀಡದಿರುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ​ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟನೆಯನ್ನು…

ಅಶೋಕ ಲೈಲ್ಯಾಂಡ್ ಬಿಎಸ್-6 ವಾಹನಗಳಿಂದ ತೊಂದರೆ – ಮಾಲೀಕರ ಸಂಘದ ಪ್ರತಿಭಟನೆ

ನೆಲಮಂಗಲ: ಅಶೋಕ ಲೈಲ್ಯಾಂಡ್ ಬಿಎಸ್-6 ಮಾದರಿಯ ವಾಹನಗಳಿಂದ ಚಾಲಕರು ಹಾಗೂ ಮಾಲೀಕರು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಎಎಂಎಲ್ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್‌ನ ಮೆಕಾನಿಕ್‌ಗಳಿಗೆ ತಾಂತ್ರಿಕ ಅರಿವು ಕೊರತೆಯಿರುವ ಕಾರಣ, ವಾಹನಗಳು ರಸ್ತೆಯಲ್ಲಿ ದಿನಗಟ್ಟಲೆ ನಿಂತು ಚಾಲಕರಿಗೆ ಸಂಕಷ್ಟ ಉಂಟಾಗಿದೆ. ಇತ್ತೀಚೆಗೆ ಒಂದು…

ಸುಳ್ಳು ಪ್ರಕರಣಗಳಿಂದ ನೈಜ ಪ್ರಕರಣಗಳ ವಿಲೇವಾರಿ ವಿಳಂಬ: ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ

ನೆಲಮಂಗಲ: ಪ್ರಜಾಪ್ರಭುತ್ವದ ನಾಲ್ಕು ಅಂಗಗಳ ವೈಫಲ್ಯದಿಂದ ಜನರಿಗೆ ಸರಿಯಾದ ಸಮಯಕ್ಕೆ ನ್ಯಾಯ ಸಿಗುತ್ತಿಲ್ಲ ಎಂದು ಉಪ ಲೋಕಾಯುಕ್ತರಾದ ನ್ಯಾ. ಬಿ. ವೀರಪ್ಪ ಅವರು ಹೇಳಿದರು. ನೆಲಮಂಗಲ ತಾಲ್ಲೂಕಿನ ಗೋಪಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಬಾಕಿ ಇರುವ ದೂರುಗಳ ವಿಚಾರಣೆ ಹಾಗೂ…

​ಮಳೆಗಾಲದಲ್ಲಿ ಮಿನಿ ಕೆರೆಯಾಗುವ ದಾಬಸ್‌ಪೇಟೆ-ಶಿವಗಂಗೆ ರಸ್ತೆ; ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ನೆಲಮಂಗಲ: ಮಳೆಗಾಲ ಬಂತೆಂದರೆ ಸಾಕು, ನೆಲಮಂಗಲ ತಾಲೂಕಿನ ಪ್ರಮುಖ ರಸ್ತೆಯಾದ ದಾಬಸ್‌ಪೇಟೆ-ಶಿವಗಂಗೆ ಮಾರ್ಗದಲ್ಲಿ ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡು ಮಿನಿ ಕೆರೆಯಂತಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಈ ಸಮಸ್ಯೆ ವರ್ಷಗಳಿಂದ ಇದ್ದರೂ, ಜನಪ್ರತಿನಿಧಿಗಳು…

ಪ್ರಧಾನಿ ಮೋದಿ 75ನೇ ಹುಟ್ಟುಹಬ್ಬ: ನೆಲಮಂಗಲದಲ್ಲಿ 75 ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು

ನೆಲಮಂಗಲ: ದೇಶದ ಹೆಮ್ಮೆಯ ನಾಯಕ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬದ ಅಂಗವಾಗಿ, ನೆಲಮಂಗಲ ತಾಲ್ಲೂಕು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ವತಿಯಿಂದ ವಿಶೇಷ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಗುಡೆಮಾರನಹಳ್ಳಿ ಸಿದ್ದಗಂಗಾ ಪದವಿ ಪೂರ್ವ…

ಪ್ರಧಾನಿ ಮೋದಿ ಅವರ 75ನೇ ಹುಟ್ಟುಹಬ್ಬವನ್ನು ‘ಸೇವಾ ದಿನ’ ಎಂದು ಆಚರಿಸಲಾಯಿತು.

2025 ರ ಸೆಪ್ಟೆಂಬರ್ 17 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭಕ್ಕಾಗಿ, ಭಾರತದಾದ್ಯಂತ ಮತ್ತು ವಿದೇಶಗಳಲ್ಲಿ ವ್ಯಾಪಕವಾದ ಆಚರಣೆಗಳನ್ನು ಏರ್ಪಡಿಸಲಾಗಿತ್ತು. ಈ ದಿನವನ್ನು ‘ಸೇವಾ ದಿನ’ ಎಂದು ಆಚರಿಸಲಾಯಿತು. ವಿವಿಧ ಕಾರ್ಯಕ್ರಮಗಳ…

ಮಾತೃಭೂಮಿ ಯುವಕರ ಸಂಘದಿಂದ 30ನೇ ವಾರ್ಷಿಕೋತ್ಸವ

ನೆಲಮಂಗಲ: ಸಂಸ್ಕೃತಿ, ಸಾಹಿತ್ಯ ಜಾನಪದ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳ ಪಾತ್ರ ಮಹತ್ವವಾದದ್ದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು. ನಗರದ ಹರ್ಷ ಆಡಿಟೋರಿಯಂನಲ್ಲಿ ಮಾತೃಭೂಮಿ ಯುವಕರ ಸಂಘದಿಂದ 30ನೇ ವಾರ್ಷಿಕೋತ್ಸವ ಪ್ರಯುಕ್ತ ಅಯೋಜಿಸಿದ್ದ ಮಾತೃಭೂಮಿ 30ರ ಸಂಭ್ರಮ…

ದೇವಸ್ಥಾನದ ಜಾಗ ರಕ್ಷಣೆಗೆ ನಗರಸಭೆ ಎದುರು ಪ್ರತಿಭಟನೆ

ನೆಲಮಂಗಲ: ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿರುವ ಮುಜರಾಯಿ ಇಲಾಖೆಗೆ ಸೇರಿದ ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯದ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡದಂತೆ ಒತ್ತಾಯಿಸಿ ನಗರಸಭೆ ಸದಸ್ಯ ಎ. ಪುರುಷೋತ್ತಮ್ ಹಾಗೂ ಗ್ರಾಮಸ್ಥರು ನಗರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ…

​ಮೂಲ ಸೌಕರ್ಯಗಳ ಪರಿಶೀಲನೆಗೆ ನೆಲಮಂಗಲಕ್ಕೆ ಮಹಿಳಾ ಆಯೋಗ ಅಧ್ಯಕ್ಷೆ ಭೇಟಿ

ನೆಲಮಂಗಲ: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ನಾಗಲಕ್ಷ್ಮಿ ಚೌಧರಿ ಅವರು ಇಂದು ನೆಲಮಂಗಲಕ್ಕೆ ಭೇಟಿ ನೀಡಿ ಸರ್ಕಾರಿ ಆಸ್ಪತ್ರೆ ಮತ್ತು ಪೊಲೀಸ್ ಠಾಣೆಯನ್ನು ಪರಿಶೀಲಿಸಿದರು. ಈ ಭೇಟಿಯಲ್ಲಿ ಅವರು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆ…