ನೆಲಮಂಗಲ: ಸಂಸ್ಕೃತಿ, ಸಾಹಿತ್ಯ ಜಾನಪದ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳ ಪಾತ್ರ ಮಹತ್ವವಾದದ್ದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ನಗರದ ಹರ್ಷ ಆಡಿಟೋರಿಯಂನಲ್ಲಿ ಮಾತೃಭೂಮಿ ಯುವಕರ ಸಂಘದಿಂದ 30ನೇ ವಾರ್ಷಿಕೋತ್ಸವ ಪ್ರಯುಕ್ತ ಅಯೋಜಿಸಿದ್ದ ಮಾತೃಭೂಮಿ 30ರ ಸಂಭ್ರಮ ಕಾರ್ಯಕ್ರ ಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜದಲ್ಲಿ ಯುವ ಸಮುದಾಯ ಹೆಚ್ಚು ಹೆಚ್ಚು ಜಾಗೃತರಾಗಬೇಕು. ರಾಜ್ಯ ಸರ್ಕಾರ ಯುವ ಸಬಲೀಕರಣಕ್ಕೆ ವಿಶೇಷ ಅರ್ಹತೆಯನ್ನು ನೀಡಿದ್ದು ಯುವಕರನ್ನು ಪ್ರೋತ್ಸಾ ಹಿಸುವ ಕೆಲಸ ನಿರಂತರ ವಾಗಿ ಮಾಡುತ್ತಿದೆ.
ನಾಡಿನಾದ್ಯಂತ ಹಲವಾರು ಸಂಘ ಸಂಸ್ಥೆಗಳು ಕಲೆ ಸಾಹಿತ್ಯ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಮಾಡುತ್ತಿವೆ. ಸಂಘ ಸಂಸ್ಥೆಗಳಿಗೆ ಪ್ರೋತ್ಸಾಹಿಸುವ ಕಾರ್ಯವೂ ಸರ್ಕಾರ ಮಾಡುತ್ತಿದೆ. ಯುವಕರ ಸಾಧನೆಯ ಕಡೆ ಮುಖ ಮಾಡಬೇಕು. ನಿರಂತರ ಅಭ್ಯಾಸದಿಂದ ಸಾಧನೆ ಮಾಡಿ ಉತ್ತಮ ಸಾಧಕನಾಗಲು ಸಹಕಾರಿಯಾಗುತ್ತದೆ ಎಂದರು.
ಕಳೆದ 30 ವರ್ಷದಿಂದ ಮಾತೃಭೂಮಿ ಯುವಕರ ಸಂಘ ಬಾಲಾಜಿ ಅವರ ನೇತೃತ್ವದಲ್ಲಿ ಸಾಕಷ್ಟು ವಿಭಿನ್ನ ಕಾರ್ಯಕ್ರಮ ಮಾಡುತ್ತಿರುವುದು ಸಂತೋಷಕರ ಸಂಗತಿ, ಮಾತೃಭೂಮಿ ಸಂಘ ಶತಮಾನದ ಸಂಭ್ರಮದ ಜೊತೆಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ವಿವಿಧ ಸಾಧಕರನ್ನು ಗುರುತಿ ಸನ್ಮಾನ ಮಾಡುತ್ತಿರುವುದು ಉತ್ತಮ ಬೆಳೆವಣಿಗೆ ಎಂದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ
ನಾಗಲಕ್ಷ್ಮೀ ಚೌಧರಿ ಮಾತನಾಡಿ
ಯುವ ಸಮುದಾಯ ಕಾನೂನು ಬಗ್ಗೆ ತಿಳಿದುಕೊಂಡು ಪ್ರಶ್ನೆ ಮಾಡುವ ಗುಣವನ್ನು ಮೈಗ್ಗೂಡಿಸಿಕೊಳ್ಳಬೇಕು.
ವಿದ್ಯೆ ಎಂಬುದು ಕೇವಲ ಪದವಿಯಷ್ಟೇ ವಿದ್ಯೆಯೊಂದಿಗೆ ಮಾನವೀಯ ಮೌಲ್ಯ, ಸೇವಾಹವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಇತ್ತೀಚೆಗೆ ನೇಪಾಳದಲ್ಲಿ ನಡೆಯುತ್ತಿರುವ ಘಟನೆ ಸಾಕ್ಷಿಯಾಗಿದೆ. ಯುವಕರು ಸಮಾಜಕ್ಕೆ ಉತ್ತಮ ಪ್ರಜೆಗಳಾಗಬೇಕು. ಮಾತೃಭೂಮಿ ಸಂಘದ 30 ವರ್ಷದಿಂದ ಯುವಕರನ್ನು ಒಗ್ಗೂಡಿಕೊಂಡು ಸಾಕಷ್ಟು ಕಾರ್ಯಕ್ರಮ ರೂಪಿಸುತ್ತಿ ರುವುದು ಸಂತೋಷಕರ ಸಂಗತಿ ಎಂದರು
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದದವರಿಗೆ, ಮಾತೃಭೂಮಿ ರಾಷ್ಟ್ರ ಪ್ರಶಸ್ತಿ, ಮಾತೃಭೂಮಿ ರಾಜ್ಯ ಪ್ರಶಸ್ತಿ, ಮಾತೃಭೂಮಿ ಸೇವಾ ಪುರಸ್ಕಾರ ಸೇರಿದಂತೆ ವಿವಿಧ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಯಿತು.
ಸಿದ್ದಲಿಂಗಸ್ವಾಮೀಜಿ, ಪಾಲನಹಳ್ಳಿ ಮಠದ ಶ್ರೀ ಸಿದ್ದರಾಜು ಸ್ವಾಮೀಜಿ ದಿವ್ಯಸಾನಿದ್ಯ ವಹಿಸಲಿದ್ದರು.
ಸಂದರ್ಭದಲ್ಲಿಮಾತೃಭೂಮಿ ಯುವಕರ ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ.ಎಸ್.ಬಾಲಾಜಿ, ರಾಜ್ಯಾಗೌರವಾಧ್ಯಕ್ಷ ರಮೇಶ್, ಖ್ಯಾತ ಜಾನಪದ ಗಾಯಕ ಗುರುರಾಜ್ ಹೊಸಕೋಟೆ, ಚಿಕ್ಕಮಂ ಗಳೂರು ಯುವಸಬಲೀಕರಣಕ್ರೀಡಾ ಇಲಾಖೆ ಉಪನಿರ್ದೇಶಕಿ ಡಾ.ಮಂಜುಳಾಹುಲ್ಲಹಳ್ಳಿ, ಹರ್ಷ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಎಸ್.ಶಿವಕುಮಾರ್, ನೆ.ಯೋ.ಪ್ರಾಧಿಕಾರ ಅದ್ಯಕ್ಷ ಎಂ.ನಾರಾಯಣ್ ಗೌಡ, ನಗರಸಭೆ ಉಪಾಧ್ಯಕ್ಷ ಆನಂದ್, ಮಾತೃಭೂಮಿ ಯುವಕರ ಸಂಘದ ಜಿಲ್ಲಾಧ್ಯಕ್ಷ ಪವನ್ ಕುಮಾರ್, ಗ್ಯಾರಂಟಿ ಸಮಿತಿ ಅದ್ಯಕ್ಷ ನಾಗರತ್ನಮ್ಮ, ಉಪನ್ಯಾ ಸಕಮಾರುತಿ, ಉದ್ಯಮಿ ನಾಗೇಶ್, ಕಲಾವಿದರಾದ ಸಿದ್ದಯ್ಯ, ಗಂಗಣ್ಣ, ದೊಡ್ಡರಿಬೈಲಪ್ಪ ಸೇರಿದಂತೆ ಹಲವರು ಇದ್ದರು