ನೆಲಮಂಗಲ: ಅಶೋಕ ಲೈಲ್ಯಾಂಡ್ ಬಿಎಸ್-6 ಮಾದರಿಯ ವಾಹನಗಳಿಂದ ಚಾಲಕರು ಹಾಗೂ ಮಾಲೀಕರು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಎಎಂಎಲ್ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್‌ನ ಮೆಕಾನಿಕ್‌ಗಳಿಗೆ ತಾಂತ್ರಿಕ ಅರಿವು ಕೊರತೆಯಿರುವ ಕಾರಣ, ವಾಹನಗಳು ರಸ್ತೆಯಲ್ಲಿ ದಿನಗಟ್ಟಲೆ ನಿಂತು ಚಾಲಕರಿಗೆ ಸಂಕಷ್ಟ ಉಂಟಾಗಿದೆ.
ಇತ್ತೀಚೆಗೆ ಒಂದು ಘಟನೆ ವೇಳೆ, ರಸ್ತೆ ಮಧ್ಯದಲ್ಲಿ ಕೆಟ್ಟ ನಿಂತಿದ್ದ ವಾಹನಕ್ಕೆ ಆರು ದಿನಗಳವರೆಗೆ ರಿಪೇರಿ ದೊರೆಯದೇ ಚಾಲಕ ತೀವ್ರ ಕಷ್ಟ ಅನುಭವಿಸಿ ಸಾವನ್ನಪ್ಪಿದ್ದಾನೆ. ಈ ದುರ್ಘಟನೆಯಿಂದ ಕುಟುಂಬ ಬೀದಿಗೆ ಬಿದ್ದಂತಾಗಿದೆ.
ಮಾಲೀಕರ ಸಂಘದ ಆಲ್ ಇಂಡಿಯಾ ಮೋಟರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್‌ನ ಉಪಾಧ್ಯಕ್ಷ ಅರವಿಂದ ಅಪ್ಪಾಜಿ ಅವರು ಮೃತ ಚಾಲಕರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಜೊತೆಗೆ, ಬಿಎಸ್-6 ಮಾದರಿಯ ತಾಂತ್ರಿಕ ದೋಷಗಳನ್ನು ಅಶೋಕ ಲೈಲ್ಯಾಂಡ್ ಕೂಡಲೇ ಬಗೆಹರಿಸಬೇಕು. ಎಎಂಎಲ್ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್‌ಗೆ ನೀಡಿರುವ ಸೇಲ್ಸ್ ಮತ್ತು ಸರ್ವಿಸ್ ಹಕ್ಕು ರದ್ದುಪಡಿಸಿ, ಹಿಂದಿನ ಟಿವಿಎಸ್ ಸಂಸ್ಥೆಗೆ ಮರಳಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ಮುಂದುವರೆದಿದೆ.