*ರಾಷ್ಟ್ರೀಯ,ಸೆಪ್ಟೆಂಬರ್ 08, 2025:* ಪ್ರಮುಖ ಹೆಲ್ತ್ ಆಂಡ್ ವೆಲ್ನೆಸ್ ಕಂಪನಿ, ಸಮುದಾಯ ಮತ್ತು ವೇದಿಕೆ ಆಗಿರುವ ಹರ್ಬಲೈಫ್ ಇಂಡಿಯಾ ಇತ್ತೀಚೆಗೆ ನಡೆದ ಬಿಗ್ ಬಾಕ್ಸ್ ಇಂಡಿಯಾ 2025 ರಲ್ಲಿ ಪ್ರತಿಷ್ಠಿತ ‘ಸಸ್ಟೇನೇಬಲ್ ಸಪ್ಲೈ ಚೈನ್ ಅವಾರ್ಡ್’ಗೆ ಪಾತ್ರವಾಗಿದೆ. ಈ ಸಮಾವೇಶದಲ್ಲಿ ಇ- ಕಾಮರ್ಸ್ ಮತ್ತು ರಿಟೇಲ್ ವ್ಯಾಪಾರ ಕ್ಷೇತ್ರದ ಭಾರತದ ಪ್ರತಿಷ್ಠಿತ ವ್ಯಕ್ತಿಗಳು ಭಾಗವಹಿಸಿ ಡಿಜಿಟಲ್ ಯುಗದಲ್ಲಿ ಗ್ರಾಹಕರು ಬ್ರಾಂಡ್ ಗಳ ಜೊತೆಗೆ ಹೇಗೆ ಸಂವಹನ ನಡೆಸುತ್ತಾರೆ ಎಂಬುದರ ಕುರಿತು ಸಂವಾದ ನಡೆಸಿದರು.
ಹರ್ಬಲೈಫ್ ಇಂಡಿಯಾ ಸಂಸ್ಥೆಯು ಶ್ರೇಷ್ಠವಾದ ಪೂರೈಕೆ ಸರಪಳಿ ಮತ್ತು ಪರಿಸರ ಜವಾಬ್ದಾರಿ ಹೊಂದಿದ್ದು, ಸಂಸ್ಥೆಯ ಈ ಬದ್ಧತೆಗೆ ‘ಸಸ್ಟೇನೇಬಲ್ ಸಪ್ಲೈ ಚೈನ್ ಅವಾರ್ಡ್’ ಸಂದಿದೆ.
*ಈ ಕುರಿತು ಮಾತನಾಡಿರುವ ಹರ್ಬಲೈಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಖನ್ನಾ ಅವರು,* “ಬಿಗ್ ಬಾಕ್ಸ್ ಇಂಡಿಯಾ 2025 ನಂತಹ ಪ್ರತಿಷ್ಠಿತ ವೇದಿಕೆಯಲ್ಲಿ ಈ ಮನ್ನಣೆಯನ್ನು ಪಡೆದಿರುವುದು ನಿಜಕ್ಕೂ ಹೆಮ್ಮೆಯಾಗಿದೆ. ಈ ಪ್ರಶಸ್ತಿಯು, ಜವಾಬ್ದಾರಿಯುತ ಮೂಲಸೌಕರ್ಯ ಸೌಲಭ್ಯ ಒದಗಿಸುವಿಕೆಯಿಂದ ಹಿಡಿದು ಉತ್ಪನ್ನ ವಿತರಣೆಯವರೆಗೆ ನಮ್ಮ ಕಾರ್ಯಾಚರಣೆಯ ಪ್ರತಿಯೊಂದು ಹಂತದಲ್ಲೂ ಸುಸ್ಥಿರತೆಯನ್ನು ಸೇರಿಸಲು ನಾವು ಮಾಡಿರುವ ಅವಿರತ ಪ್ರಯತ್ನಗಳಿಗೆ ಸಿಕ್ಕ ಗೌರವವಾಗಿದೆ. ಈ ಪ್ರಶಸ್ತಿಯು ಜನರು ಮತ್ತು ಸಮುದಾಯಗಳಿಗೆ ಆರೋಗ್ಯಕರ ಮತ್ತು ಹೆಚ್ಚು ಸುಸ್ಥಿರವಾದ ಜಗತ್ತನ್ನು ನಿರ್ಮಿಸುವ ನಮ್ಮ ದೃಷ್ಟಿಕೋನವನ್ನು ಮತ್ತು ನೈತಿಕ ವ್ಯವಹಾರ ಅಭ್ಯಾಸಗಳ ಕಡೆಗಿನ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ” ಎಂದು ಹೇಳಿದರು.
ಬಿಗ್ ಬಾಕ್ಸ್ ಇಂಡಿಯಾ 2025 ಸಮಾವೇಶದಲ್ಲಿ ರಿಟೇಲ್ ಮತ್ತು ಇ-ಕಾಮರ್ಸ್ ಕ್ಷೇತ್ರದ ನಾಯಕರು, ಆವಿಷ್ಕಾರಕರು ಮತ್ತು ಬದಲಾವಣೆಯ ಹರಿಕಾರರು ಭಾಗವಹಿಸಿದ್ದರು. ಭಾರತದ ಮಾರುಕಟ್ಟೆಯ ಭವಿಷ್ಯವನ್ನು ರೂಪಿಸುವ ಸಂವಾದ ನಡೆಸಿದರು. ಈ ಕಾರ್ಯಕ್ರಮದಲ್ಲಿ ಓಮ್ನಿಚಾನಲ್ ತಂತ್ರಗಳು, ಕ್ವಿಕ್ ಕಾಮರ್ಸ್, ಎಐ ಚಾಲಿತ ವೈಯಕ್ತೀಕರಣ ಮತ್ತು ಹೊಸ ಡಿ2ಸಿ ಮಾದರಿಗಳನ್ನು ಒಳಗೊಂಡಂತೆ, ಮೂಲಸೌಕರ್ಯ ಮತ್ತು ನಿಯಂತ್ರಕ ಸವಾಲುಗಳ ಕುರಿತು ಚರ್ಚೆ ನಡೆಸಲಾಯಿತು. ಈ ಕಾರ್ಯಕ್ರಮವು ಒಟ್ಟಾರೆಯಾಗಿ ಜ್ಞಾನ ಹಂಚಿಕೆ, ಸಹಯೋಗ ಮತ್ತು ಪಾಲುದಾರಿಕೆ ಕೈಗೊಳ್ಳಲು ಉತ್ತಮ ವೇದಿಕೆಯಾಗಿ ಕಾರ್ಯನಿರ್ವಹಿಸಿತು. ವಿಶೇಷವಾಗಿ ರಿಟೇಲ್ ವ್ಯಾಪಾರ ವ್ಯವಸ್ಥೆಯಾದ್ಯಂತ ಸುಸ್ಥಿರ ಬೆಳವಣಿಗೆ ಮತ್ತು ಆವಿಷ್ಕಾರವನ್ನು ಅಳವಡಿಸಿಕೊಳ್ಳಲು ಬೇಕಾದ ಒಳನೋಟಗಳನ್ನು ನೀಡಿತು.